ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆ ತಾಂತ್ರಿಕ ಸಲಹಾ ಸಮಿತಿ ಎರಡನೇ ಸಭೆ ಇಂದು ನಡೆಯಿತು - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಸುದ್ದಿ ಸಮಾಚಾರ

ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆ ತಾಂತ್ರಿಕ ಸಲಹಾ ಸಮಿತಿ ಎರಡನೇ ಸಭೆ ಇಂದು ನಡೆಯಿತು

28 Oct 2020 12:40 pm

...


ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ

27 Oct 2020 08:28 pm


ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ

27 Oct 2020 08:24 pm

ಕ್ರ. ಸಂ.

ಹೆಸರು / ವಿಳಾಸ / ಶ್ರೀ / ಶ್ರೀಮತಿ

ಕೃತಿಯ ಹೆಸರು

1.                  

ಸಂತೋಷ ಈ ನಾಯಿಕ, ಬೆಳಗಾವಿ

ಕವನಗಳು

2.                  

ಎಸ್‌.ಆರ್.‍ ನಾರಾಯಣ, ಮೈಸೂರು

ಕವನಗಳು

3.                  

ಡಾ. ಕೆ. ರಮೇಶ್‌, ವಿದ್ಯಾರಣ್ಯ

ಜಾನಪದ ಸೊಬಗು

ಕ್ರ. ಸಂ.

ಹೆಸರು / ವಿಳಾಸ / ಶ್ರೀ / ಶ್ರೀಮತಿ

ಕೃತಿಯ ಹೆಸರು

1.                  

ಪ್ರದೀಪ್‌ ಎನ್.ವಿ., ಮೈಸೂರು

ಜಾತಿವಿನಾಶದ ಹೆಜ್ಜೆಗಳು...

2.                  

ಕೃಷ್ಣ ಎಸ್., ಮಂಡ್ಯ ಜಿಲ್ಲೆ

ಅಂಬೇಡ್ಕರ್‌ ಅವರ ಚಿಂತನೆಯಲ್ಲಿ ಅಸ್ಪೃಶ್ಯತೆ

3.                  

ಡಾ. ಶರಣಪ್ಪ ಬಿ. ಚಲವಾದಿ, ರಾಯಚೂರು ಜಿಲ್ಲೆ

ದಲಿತ ಸಾಹಿತ್ಯಾವಲೋಕನ

4.                  

ಆನಂದ ಎಸ್. ಗೊಬ್ಬಿ, ಯಾದಗಿರಿ ಜಿಲ್ಲೆ

ನಿರುದ್ಯೋಗಕ್ಕೆ ಹೆಣವಾದ ಅಪ್ಪ

5.                  

ಸುರೇಶ ಜಿ.ಎಸ್.,...


2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ

21 Oct 2020 03:04 pm

2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ನೀಡುವ ಯೋಜನೆಯಡಿ ಆಯ್ಕೆಗೊಂಡ ಯುವಬರಹಗಾರರು ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಾಧಿಕಾರಕ್ಕೆ ಸಲ್ಲಿಸಲು ಕೊನೆಯ ದಿನಾಂಕ:10.11.2020ರಂದು ನಿಗದಿ ಮಾಡಲಾಗಿತ್ತು.

ಆದರೆ ಅನೇಕರು ಈ ದಿನಾಂಕವನ್ನು ವಿಸ್ತರಿಸಲು ಕೋರಿದ ಹಿನ್ನೆಲೆಯಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಮುದ್ರಿತ ಪ್ರತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:25.11.2020ರವರೆಗೆ ವಿಸ್ತರಿಸಲಾಗಿದೆ.

...


ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು

20 Oct 2020 07:19 pm

...


ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ

20 Oct 2020 08:01 am

ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಇಂದು ನಡೆಯಿತು. ಗೂಗಲ್ ಮೀಟ್ ಮೂಲಕವೂ ಹಲವರು ಭಾಗಿಯಾಗಿದ್ದರು.

...


2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

09 Oct 2020 11:41 am

ಕ್ರ. ಸಂ.

ಲೇಖಕರು /ಶ್ರೀಮತಿ ಶ್ರೀ

ಕೃತಿ

1.

ಶಂಕರ, ಜಿ: ಯಾದಗಿರಿ

ನನ್ನೆದೆಯ ಭಾವನೆಗಳು

2.

ವೀಣಾ ಪಿ, ದಾವಣಗೆರೆ ಜಿಲ್ಲೆ

ಭಾವೋದ್ದೀಪ್ತಿ

3.

ಶಿವಾನಂದ , ಕಲಬುರ್ಗಿ ಜಿಲ್ಲೆ

ಅಂತರಂಗ

4.

ದೇವರಾಜ ಜಿ.ಸಿ. ಘಂಟೆ, ರಾಯಚೂರು ಜಿ|

ನನ್ನ ಅವ್ವ

5.

ಶ್ರುತಿ ಬಿ.ಆರ್.‍, ಬೆಂಗಳೂರು

ಖಾಲಿ ಪರ್ಸು

6.

ಬಿ.ಎಂ. ಶಿಲ್ಪ, ಬೆಂಗಳೂರು

ಕೊಲ್ಲುವವನೇ...


ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ

07 Oct 2020 08:10 pm

ಡಾ. ಬಸವರಾಜ ಕಲ್ಗುಡಿಯವರಿಗೆ ಡಾ. ಎಂ.ಎಂ. ಕಲಬುರ್ಗಿ ಪ್ರಶಸ್ತಿ

ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದ್ದು, ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಕಲ್ಗುಡಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. 

ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಐಬಿಹೆಚ್‌ ಪ್ರಕಾಶನಕ್ಕೆ ನೀಡಲಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತೀ ವರ್ಷವೂ ನೀಡಲಾಗುವ ಜಿ.ಪಿ. ರಾಜರತ್ನಂ ಸಾಹಿತ್ಯ...


ಇಂದು ಉಪ ಸಮಿತಿ ಸಭೆ ಸೇರಿ ಯುವ ಬರಹಗಾರರ ಚೊಚ್ಚಲ ಕೃತಿಗಳ ಆಯ್ಕೆಗೆ ಹಸ್ತಪ್ರತಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ

05 Oct 2020 10:23 pm

...


ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ

28 Sep 2020 03:06 pm

ಕನ್ನಡದ ಮತ್ತೋರ್ವ ಹಿರಿಯ ಸಾಹಿತಿ, ವಿದ್ವಾಂಸ ಹಿ. ಚಿ. ಶಾಂತವೀರಯ್ಯ ಅವರು ವಿಧಿವಶರಾಗಿದ್ದಾರೆ. ದುರ್ದೈವದ ಸಂಗತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ತಯಾರಿಕೆಯಲ್ಲಿ ಅವರ ಪಾತ್ರ ದೊಡ್ಡದು. ಅವರ ನಿಧನಕ್ಕೂ ಸಂತಾಪಗಳು, ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಡಾ. ನಂದೀಶ್ ಹಂಚೆ ತಿಳಿಸಿದ್ದಾರೆ

...


ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

28 Sep 2020 03:05 pm

ಕನ್ನಡದ ಹಿರಿಯ ವಿಮರ್ಶಕ, ಚಿಂತಕ, ಬರಹಗಾರ ಡಾ. ಜಿ. ಎಸ್. ಆಮೂರ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ.

ಹಿರಿಯ ತಲೆಮಾರಿನ ಸಾಹಿತ್ಯದ ಮೇರು ಪ್ರತಿಭೆಯೆಂದು ಪರಿಗಣಿಸಲ್ಪಟ್ಟಿದ್ದ ಜಿ. ಎಸ್. ಆಮೂರ ಕನ್ನಡ ನಾಡು ಕಂಡ ವಿಶಿಷ್ಟ ದೃಷ್ಟಿಕೋನದ ಚಿಂತಕ, ಇಂಗ್ಲೀಷ್ ಸಾಹಿತ್ಯದಲ್ಲೂ ಅಪಾರ ಜ್ಞಾನ ಹೊಂದಿದ್ದ ಅವರು ಅಮೆರಿಕ, ಬ್ರಿಟನ್ಗಳಲ್ಲಿನ ಸಾಹಿತ್ಯಾಸ್ತಕರಿಗೂ ಚಿರ ಪರಿಚಿತರು....


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು

09 Sep 2020 01:34 pm

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು. ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್, ನಿರ್ದೇಶಕರಾದ  ರಂಗಪ್ಪ ಹಾ ಜರಿದ್ದರು. 

...


ಕನ್ನಡ ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸಭೆ ಇಂದು ಆಯೋಜನೆಗೊಂಡಿತು

26 Aug 2020 07:33 pm

ಕನ್ನಡ ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸಭೆ ಇಂದು ಆಯೋಜನೆಗೊಂಡಿತು. Zoom app ಮುಲಕ ಈ ಸಭೆ ನಡೆಸಲಾಯಿತು. 2020-21 ನೆ ಸಾಲಿನ ಕ್ರಿಯಾ ಯೋಜನೆ ಹಾಗೂ ಇತರ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು . ಕನ್ನಡ ಪುಸ್ತಕ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಎಂ ಎನ್. ನಂದೀಶ್ ಹಂಚೆ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

...


ಗೀತಾ ನಾಗಭೂಷಣ ಅವರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

29 Jun 2020 12:59 pm

ಕನ್ನಡದ ಹಿರಿಯ ಸಾಹಿತಿ ಶ್ರೀಮತಿ ಗೀತಾ ನಾಗಭೂಷಣ ಅವರ ನಿಧನಕ್ಕೆ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಂ. ಎನ್. ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಗೀತಾ ನಾಗಭೂಷಣ ಅವರು ಕನ್ನಡ ಸಾಹಿತ್ಯಲೋಕ ಕಂಡ ಪ್ರಗತಿಪರ ಚಿಂತನೆಯ ಲೇಖಕರಲ್ಲಿ ಒಬ್ಬರಾಗಿದ್ದರು. ಮಹಿಳಾ ಸಂವೇದನೆಯನ್ನು ಅವರಷ್ಟು ಶಕ್ತಿಯುತವಾಗಿ ಪ್ರತಿಪಾದಿಸಿದವರು ವಿರಳ. ಹಿಂದುಳಿದ ವರ್ಗಗಳ ಬಡಜನರ ತಲ್ಲಣಗಳನ್ನು, ವಿಶೇಷವಾಗಿ ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಅವರು ತಮ್ಮ ಕಾದಂಬರಿಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದರು. ಅವರ 'ಬದುಕು' ಹಾಗೂ 'ಹಸಿಮಾಂಸ...


ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.

21 May 2020 07:45 pm

ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.
 
:: ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ ::
 

 ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ

08 May 2020 07:43 pm

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ 2019 ರಿಂದ ಡಿಸೆಂಬರ್ 2019 ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ ಬಹುಮಾನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಕೋವಿಡ್-19ರ ಪರಿಸ್ಥಿ ಹಿನ್ನೆಲೆಯಲ್ಲಿ ಪುಸ್ತಕ ಕಳಿಸುವ ಕೊನೆ ದಿನಾಂಕವನ್ನು 30 ಮೇ 2020ರ ವರೆಗೆ ವಿಸ್ತರಿಸಲಾಗಿದೆ 

ಆಸಕ್ತ ಪ್ರಕಾಶಕರು /ಮುದ್ರಕರು/ ಕಲಾವಿದರು / ಲೇಖಕರುಗಳು...


2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ.

08 May 2020 07:34 pm

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಕೋವಿಡ್-19ರ ಪರಿಸ್ಥಿ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು 30 ಮೇ 2020ರ ವರೆಗೆ ವಿಸ್ತರಿಸಲಾಗಿದೆ. 

ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ...


ನಿಸಾರ್ ಅಹಮದ್ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

03 May 2020 05:47 pm

 

ಕನ್ನಡದ ಪ್ರಖ್ಯಾತ ಕವಿ ನಿಸಾರ್ ಅಹಮದ್ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ ಎನ್ ನಂದೀಶ್ ಹಂಚೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕೊನೆಯಾಯಿತು ಕನ್ನಡದ ಕಾವ್ಯ ಉತ್ಸವ ಎಂದು ಅವರ ಅಗಲಿಕೆಯ ನೋವನ್ನು ತೋಡಿಕೊಂಡಿರುವ ನಂದೀಶ್ ಹಂಚೆ ಅವರು, ನಿಸಾರ್ ಅಹಮದ್ ಅವರು ಈ ಶತಮಾನ ಕಂಡ ಶ್ರೇಷ್ಠ ಕವಿ ಎಂದು ಬಣ್ಣಿಸಿದ್ದಾರೆ.

ಪದ್ಮಶ್ರೀ, ನಾಡೋಜ, ಪಂಪ ಪ್ರಶಸ್ತಿ, ಅನ ಕೃಷ್ಣರಾಯ ಪ್ರಶಸ್ತಿ,...


ಪಾಟೀಲ ಪುಟ್ಟಪ್ಪ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ

17 Mar 2020 02:57 pm

ಕನ್ನಡದ ಖ್ಯಾತ ಪತ್ರಕರ್ತ, ಕನ್ನಡಪರ ಹೋರಾಟಗಾರ, ಲೇಖಕ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್‌ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಪಾಟಿಲ ಪುಟ್ಟಪ್ಪ ಅವರಂತಹ ಧೀಮಂತ ವ್ಯಕ್ತಿಯ ನಿಧನದಿಂದ ಕನ್ನಡ ನಾಡು ತನ್ನ ದಿಟ್ಟ ದನಿಯನ್ನ ಕಳೆದುಕೊಂಡಂತಾಗಿದೆ  ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆ ಮತ್ತು ಸಂಸ್ಕೃತಿ, ಕನ್ನಡ ನಾಡು ನುಡಿಯ ವಿಚಾರಗಳಲ್ಲಿ ಯಾವುದೇ ಒಡಕು ಕಂಡುಬಂದಲ್ಲಿ...


ಅರ್ಜಿಸಲ್ಲಿಸುವ ಲೇಖಕರ ವಯೋಮಿತಿಯನ್ನು 18 ರಿಂದ 40 ವರ್ಷಕ್ಕೆ ಹೆಚ್ಚಿಸಲಾಗಿದೆ.

16 Mar 2020 02:34 pm

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಸಲ್ಲಿಸುವ ಲೇಖಕರ ವಯೋಮಿತಿಯನ್ನು 18 ರಿಂದ 40 ವರ್ಷಕ್ಕೆ ಹೆಚ್ಚಿಸಲಾಗಿದೆ.      

ಅರ್ಜಿಗಳನ್ನು ದಿನಾಂಕ:15.04.2020ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002 – ಅವರಿಗೆ ಕಳುಹಿಸಿಕೊಡಲು ಕೋರಿದೆ. 

ಹೆಚ್ಚಿನ ಮಾಹಿತಿಗಾಗಿ :
ಆಡಳಿತಾಧಿಕಾರಿಗಳು,...ನಮ್ಮ ವಿಳಾಸ

ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಭವನ,
ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨
ದೂರವಾಣಿ : ೦೮೦-೨೨೧೦೭೭೦೪

© 2020, ಕನ್ನಡ ಪುಸ್ತಕ ಪ್ರಾಧಿಕಾರ