ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ

ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ

ಪುಸ್ತಕ ಸೂಚಿ

ಕ್ಯಾಮೆರಾ ಅನ್ನುವುದು ಆಧುನಿಕತೆ ನಮಗೊದಗಿಸಿದ ಮೂರನೇ ಕಣ್ಣು. ಕಂಡದ್ದನ್ನು ಕಂಡ ರೂಪದಲ್ಲಿ ತತ್ಕಾಲವಾದರು ಸ್ತಬ್ಧಗೊಳಿಸಿಟ್ಟುಕೊಳ್ಳುವ, ಪುನರಾವರ್ತಿತ ಚಲನಶೀಲವಾಗಿಸಿಕೊಳ್ಳುವ ಅದ್ಭುತ ಸಾಧನ. ಅಷ್ಟೇ ಅದ್ಭುತ ಸಾಧಕರೆಂದರೆ ಅಂತಹ ಒಂದು ಯಂತ್ರವನ್ನು ತಮಗಿಷ್ಟಬಂದಂತೆ ಪಳಗಿಸಿಕೊಂಡು ಮಗದಷ್ಟು ಅದ್ಭುತಗಳನ್ನು ಸೆರೆಹಿಡಿದು ಕೊಡುವ ಕ್ಯಾಮೆರಾಮೆನ್‌ಗಳು. ಅಂತಹವರಲ್ಲಿ ಕರ್ನಾಟಕದ ತುತ್ತತುದಿಯ ನೆಲ ಬೀದರ್‌ನ ಗುಲಾಂ ಮುಂತಕಾ ಹೆಸರು ಮುಂಚೂಣಿಗೆ ಬಂದು ನಿಲ್ಲುತ್ತೆ. ಯಾವುದೋ ಕ್ಯಾಮೆರಾದ ಅಂಗವನ್ನು ಮತ್ತ್ಯಾವುದೋ ಕ್ಯಾಮೆರಾಕ್ಕೆ ಕಸಿ ಮಾಡಿ, ತಯಾರಕರೆ ನಿಬ್ಬೆರಗಾಗುವಂತೆ ಅದಕ್ಕೊಂದು ಹೊಸ ಕಾರ್ಯಶೀಲನಾ ಆಯಾಮ ತಂದುಕೊಟ್ಟು ಕೆಲಸ ಮಾಡಿಸುವ ಈ ಜಾದೂಗಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರೂ ಪ್ರಚಾರದಿಂದ ದೂರವೇ ಉಳಿದಂತವರು. ಅಂತಹ ಎಲೆ ಮರೆ ಕಾಯಿಯನ್ನು ಲೇಖಕ ದೇವು ಪತ್ತಾರರವರು ಈ ಕೃತಿಯ ಮೂಲಕ ಜಗತ್ತಿಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಿದ್ದಾರೆ.

 • ಗುರುತು ಸಂಖ್ಯೆ.

  KPP 0126

 • ಲೇಖಕರು

  ದೇವು ಪತ್ತಾರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-283-0

 • ಬೆಲೆ

  45/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 23/-

 • ಪುಟಗಳು

  101

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ